Wednesday, July 9, 2025


सहस्रशीर्षा पुरुषः सहस्राक्षः सहस्रपात्

ಅನೇಕ ಕಣ್ಣುಗಳುಳ್ಳ  ಸಾವಿರಾರು ಕಾಲುಗಳಿಂದ ಕೂಡಿದ ಅಸಂಖ್ಯಾತ ತಲೆಗಳುಳ್ಳ ಪುರುಷ

ಸ್ವರೂಪಿಯಾದ ಪರಮಾತ್ಮನು 


स भूमिं विश्वतो वृत्वात्यतिष्ठद्दशाङुलम् ॥१॥

ಬ್ರಹ್ಮಾಂಡ ಸ್ವರೂಪವಾದ ಈ ಜಗತ್ತನ್ನು ಎಲ್ಲ ಕಡೆಗಳಿಂದಲೂ ಆಕ್ರಮಿಸಿಕೊಂಡು 

(त्यतिष्ठद्दशाङुलम्) ಹತ್ತು  ಬೆರಳುಗಳಷ್ಟು ಭೂಯುಮಂಡಲದ ಹೊರಗೆ ವ್ಯಾಪಿಸಿಕೊಂಡಿದ್ದಾನೆ 

पुरुष एवेदं सर्वं यद्भूतं यच्च भव्यम् ।

ಯಾವದು ಕಳೆದು ಹೋದದ್ದು ಇದೆಯೋ ಯಾವದು ಮುಂದೆ ಜಗತ್ತಿನಲ್ಲಿ ಉಂಟಾಗಲಿದೆಯೋ ಈಗ ಇರುವ ಸರ್ವವೂ ಆ ಪರಮಾತ್ಮನೇ ಆಗಿದ್ದಾನೆ 

उतामृतत्वस्येशानो 

ಮಾತು ಮೃತ್ಯುವೇ ಇಲ್ಲದ ದೇವತೆಗಳ ಸಮುಹಕ್ಕೆ ಯಜಮಾನನಾದ ಆ ಪುರುಷ ಸ್ವರೂಪಿಯಾದ ಪರಮಾತ್ಮನು 

यदन्नेनातिरोहति ॥२॥

ಯಾವ ಕಾರಣದಿಂದ ಪ್ರಾಣಿಗಳ ಆಹಾರ ಸ್ವರೂಪದಲ್ಲಿದ್ದು ಈ ಜಗದ  ಎಲ್ಲ ಪ್ರಾಣಿಗಳನ್ನು ಜೀವಿಸುವಂತೆ ಮಾಡುತ್ತಾನೆಯೋ ಆದ್ದರಿಂದ ಅವನು ಪರಮಾತ್ಮನೇ ಆಗಿದ್ದಾನೆ ..


एतावानस्य महिमातो ज्यायाँश्च पूरुषः ।


ಈ ವಿರಾಟ್ ಪುರುಷನ ಸ್ವಾಮಾರತ್ಯವು ಭೂತ ಭವಿಷ್ಯ ವರ್ತಮಾನ ಕಾಲಕ್ಕೆ ಸಂಭಂದಿಸಿದ ಈ ಜಗತ್ತು ಮಾತ್ರವಾಗಿದೆ .

ಅವನ ವಾಸ್ತವ ಮಹಿಮೆಯಾದರೋ ಇದಕ್ಕಿಂತಲೂ ಅತ್ಯಂತ ಅಧಿಕವಾದದ್ದು 


पादोऽस्य विश्वा भूतानि त्रिपादस्यामृतं दिवि ॥३॥

ಈ ಪ್ರಪಂಚದಲ್ಲಿರುವ ಕಾಲತ್ರಯಗಳಲ್ಲಿ ಜನಿಸಿದಂತಹ ಪ್ರಾಣಿ ಸ್ವರೂಪವು ..ಈ ಭಗವಂತನ ಪರಮಾತ್ಮನ ಕಾಲು ಬಾಗ ವಾಗಿರುತ್ತದೆ . ಈ ಪುರುಷನ ಉಳಿದ ಮುರು ಭಾಗವು ನಾಶ ರಹಿತವಾಗಿ ಪ್ರಕಾಶಮಾನವಾದಂತಹ ಸ್ವರ್ಗದಲ್ಲಿ ಇರುತ್ತದೆ .



त्रिपादूर्ध्व उदैत्पूरुषः पादोऽस्येहाभवत्पुनः ।

ಮೂರೂ ಭಾಗಗಳಿಂದ ಕೂಡಿದ ಈ ಪರಮಾತ್ಮನು ಈ ಜಗತ್ತಿನಿಂದ ಹೊರಗಿದ್ದು ಮೇಲಕ್ಕೆ ಹೋದನು. ಇವನ ಕಾಲು ಭಾಗವು ಈ ಜಗತ್ತಿನಲ್ಲಿ ಪುನಃ ತನ್ನ ಮಾಯೆಯಾದಂತಹ ಸೃಷ್ಟಿ ಸಂಹಾರ ರೂಪದಿಂದ ಇರುತ್ತದೆ 

ततो विष्वङ् व्यक्रामत्साशनानशने अभि ॥४॥

ಮಾಯೆಯಿಂದ ಹೊರಟ ಅನಂತರ ವಿಶ್ವ ದೇವಾ ಆದಿಸ್ವರೂಪದಿಂದ ಸರ್ವತ್ರ ಸಂಚಾರ ಮಾಡುತ್ತಾ ಆಹಾರ ಸೇವನೆಗಳಿಂದ ಕೂಡಿದ ಆಹಾರವನ್ನು ಸ್ವೀಕರಿಸದ ಅಚೇತನವಾದಂತಹ ಸ್ಥಾವರ ವಸ್ತುಗಳ ರೂಪದಿಂದ ಎಲ್ಲದರಲ್ಲಿಯೂ ಕೂಡ ಪರಮಾತ್ಮನು ವಿವಿಧ ರೂಪದಿಂದ ವ್ಯಾಪಿಸಿದನು ..


तस्माद्विराळजायत विराजो अधि पूरुषः ।

ಆದಿಪುರುಷನಿಂದ ಬ್ರಹ್ಮಾಂಡವೆಂಬಂತಹ ಶರೀರವು ಉಂಟಾಯಿತು . ಆ ಬ್ರಹ್ಮಾಂಡ ದೇಹದ ಮೇಲೆ ಪುರುಷ ರೂಪದ ಒಂದೇ ಗಂಡು ದೇಹವು ಉಂಟಾಯಿತು 

स जातो अत्यरिच्यत पश्चाद्भूमिमथो पुरः ॥५॥

ಹುಟ್ಟಿದ ಆ ವಿರಾಟ ಪುರುಷನು ನಾಲ್ಕು ಕಾಲುಗಳಿಂದ ಅಡ್ಡಾಡುವ ಪ್ರಾಣಿ ಮನುಷ್ಯಾದಿ ರೂಪಗಳಿಂದ ಬಹಳವಾಗಿ ಬಹುವಿಧವಾಗಿ ಉಂಟಾದನು 

ದೇವಾದಿ ಜೀವವನ್ನು ಹೊಂದಿದ ಅನಂತರ ಭೂಯುಮಂಡಲವನ್ನು ಸೃಷ್ಟಿಸಿದನು .. ಭೂಮಂಡಲದ ಸೃಷ್ಟಿ ಆದ ಮೇಲೆ ಜೀವಿಗಳ ಶರೀರವನ್ನು ಸೃಷ್ಟಿಸಿದನು 


यत्पुरुषेण हविषा देवा यज्ञमतन्वत ।

ಯಾವಾಗ ದೇವತೆಗಳ ಶರೀರಗಳು ಉಂಟಾಗುತ್ತಿರುವಾಗ ಆ ದೇವತೆಗಳು ಮುಂದಿನ ಸೃಷ್ಟಿಯ ಸಿದ್ದಿಗಾಗಿ ಪುರುಷ ಆಕಾರದ ಪರಮಾತ್ಮನೆಂಬಂತಹ ಹವಿಸ್ಸಿನಿಂದ .. ಮಾನಸ ಯಾಗವನ್ನು ಮಾಡಿದರು 


वसन्तो अस्यासीदाज्यं ग्रीष्म इध्मः शरद्धविः ॥६॥

ವಸಂತ ಋತುವನ್ನು ತುಪ್ಪವನ್ನಾಗಿ ಮನಸ್ಸಿನಿಂದ ನಿರ್ಣಯಿಸಿದರು . ಗ್ರೀಷ್ಮ ಋತುವು ಯಜ್ಞದ ಸಮಿದೆಯಾಗಿ ಇತ್ತು .. ಶರತ್ ಋತುವು ಹವಿಸ್ಸಾಗಿ ದೇವತೆಗಳ ಮಾನಸ ಯಾಗದಲ್ಲಿ ಆಗಿತ್ತು .