ನನ್ನೆಲ್ಲ ದೇಹ ಬಡಿತ.. ನೀನಲ್ಲ, 'ಕನಸು' ಎಂದು ತಿಳಿದರೂ ..
ಕೆಲವೊಮ್ಮೆ ನೀನು ನಿಜವೆಂದು ನಂಬಿದ್ದೆ ..
ಕನಸಿನ ಹೃದಯಕೆ ಒಲುಮೆಯ ಪ್ರೀತಿಯು ಎಂದಿಗೂ ವಿಯೋಗ ..
ಎಲ್ಲ ಕಳೆದುಕೊಂಡ ಏಕಾಂಗಿ ಆತ್ಮದ ಕಲ್ಪನೆ ..
ಆ ಎಲ್ಲ ವೈಭವದ ದಿನಗಳು ಅತಿರೇಕದ ಸ್ಪಷ್ಟನೆ ..
ನಿನ್ನಾ ಮೃದು ಸ್ಪರ್ಶ ನನ್ನ ಭಾವನೆಯ ಕೆದಕಿವೆ ..
ನಿನ್ನಾ ತುಟಿಗಳ ಸಿಹಿರುಚಿ ಕೋಲ್ಮಿಂಚ ಬೆಳಗಿವೆ
ನಿನ್ನಾ ಹೃದಯ ಬಡಿತ ನನ್ನ ಹೃದಯವ ಹಿಡಿದಿವೆ ..
ನಿನ್ನಾ ಬಿಸಿಯುಸಿರು ಬೆವರ ಕತ್ತ ಚರ್ಮವ ತಣಿಸಿದೆ..
ಪ್ರೇಮಿಗಳಂತೆ ಹಿಡಿದಪ್ಪಿವೆ ನಿನ್ನಾ ಕೈ ಬಲ ..
ಆಗಲೇ ದಿಟ್ಟಿಸಲು -ನಿನ್ನ- ಈ ಕಣ್ಣ ತೆರೆದೆ, ಆದರೆ ನೀನಿಲ್ಲವಲ್ಲ ಅಲ್ಲಿ ..
ಕನಸಲ್ಲೇ ಮರೆಯಾದ ಮರೀಚಿಕೆಯಾದೆ ...
ನೀನು ನಿಜವಲ್ಲವೆಂದರಿತಾಗ .. ಕಣ್ಣಿನಲ್ಲಿ ಕನಸಿಲ್ಲದ ಕಣ್ಣೀರು !!!
ಉದ್ವೇಗದ ರಕ್ತದ ಚಲನೆ ..
ಮತ್ತೊಮ್ಮೆ ನನ್ನ ಹೃದಯ ಬರಿದು .. ಆತ್ಮ ಒಬ್ಬೊಂಟಿ ..
ಮತ್ತೊಮ್ಮೆ ಕನಸಿಗೆ ಜಾರುವ ತವಕ ..
ಕನಸೆಲ್ಲ ನನಸಾಗುವ ಆಸೆಯ ಕುಹುಕ ..
ನೀ ಬಾರೆಯಾ ಮತ್ತೆ .. ಕೇವಲ ನನಗಾಗಿ ..
- ಅಮರ ಕಾನುಗೋಡು