Wednesday, February 10, 2021

ಬಾಲ್ಯದ ಹಂಬಲ

 ಮುಖಾರವಿಂದದ ಬದಲಾವಣೆಯೇ ಪುರಾವೆ 

ಆ ಮೊದಲ ಹಾಲು ಹಲ್ಲುಗಳು ತೊದಲನುಡಿಯು ಬರಿದೆ ನೆನಪು !!

ತುದಿಯಿಲ್ಲದ ಏಕೆ ಎಂಬ ಪ್ರಶ್ನೆಗಳ ಕೊನೆಯಾಗಿವೆ 

ಕುಳಿಯೊಡೆದ ಕೆನ್ನೆಗೆ ಮದವೇರಿಸುವ ಆ ಮುಗ್ದ ನಗುವೆಲ್ಲಿ ?

ಈ ಮುಗ್ದ ಜೀವನದ ನೆನಪನ್ನು ಕೈ ಜಾರುವ ಮುನ್ನ ಗಟ್ಟಿ ಹಿಡಿದು ಮೆಲುಕುವ ಹಂಬಲ 

ಮರಳು ರಾಶಿಯಲ್ಲಿ ಗುಬ್ಬಚ್ಚಿ ಹುಡುಕುವ ಜಾಡು .. 

    ಮಲಗಿದ ನಿದ್ರೆಯಲ್ಲಿ ನುಸುಳಿ ಹೋಗಿವೆ ಗುಮ್ಮನಾಗಿ 

ಅಲ್ಲಿಯೇ ಇರುವನೆಂಬ ನೆನಪು ಸೋತು ಹೋಗುತ್ತಿವೆ ಉಟ್ಟ ಬಟ್ಟೆಯು ಗಿಡ್ಡವಾಗಲು ..

ಮತ್ತೊಮ್ಮೆ ಬಾಗಿಲ ಚಿಲಕ ಹಾಕಿಲ್ಲವೇನೋ ಎಂಬ ತವಕ ನಿದ್ರೆಯ ಮಂಪರಿನಲ್ಲಿ ..

ಹೃದಯದಂಗುಲ ಅಂಗುಲದ್ಲಲೂ ನೆನಪ ಮಣಿಗಳ ಮಾಲೆ ..

ದಿನ ದಿನಗಳ ಪ್ರತಿ ತಪ್ಪಿಗೂ ಹಿರಿಯರ ಕ್ಷಮೆ ನನ್ನ ನಾ ಸರಿಪಡಿಸಿಕೊಳ್ಳಲು ಸದಾವಕಾಶ 

ನೆನೆವೆ ನಾ ನನ್ನ ಆ ಬರಿದೆ ನೆನಪೆನೆಂಬ ಬಾಲ್ಯವ