Friday, December 11, 2015

ಮಲ್ಲಿಗೆಯೇ



ಬೆಳದಿಂಗಳೇ 
ಚಂದಿರನ ಮಡಿಲ ಮಲ್ಲಿಗೆಯೇ 
ಬೆಳಕ ಸುವಾಸನೆಯ ಚೆಲ್ಲೇ ..
ಘಮಿಸುವ ನಿನ್ನ ತಂಗಾಳಿಯ ..
ಮಿಂದ  ಚರ್ಮವ ಬೆಳಗಿಸೆ..
ನಿನ್ನ ಹತ್ತಿರ ಎನ್ನ ಸೆಳೆದು 
ಪಿಸುಮಾತ ಹಸಿವನು ಇಂಗಿಸೆ.. 
ನರ್ತಿಸೆ ನನ್ನೊಡೆ ..
ಹಸಿದು ಹಿಡಿಯೆ ನನ್ನ ಕೊರಳ ..
ಮಂದವಾಗದ ಬೆಳಕ ನೀ ಚೆಲ್ಲೇ ..
ರವಿಯ ಮೊದಲ ಕಿರಣದೊರೆಗೂ 
ದೂರ ಬಹುದೂರ ತೇಲಿಸೇ ನನ್ನ ..
ಆಲಿಂಗನದ ಬಲದಿ 
ತೊದಲ ನುಡಿಯ ದಣಿಸೆ ..
ಮುದ್ದಿಸೆ ಮಂದಹಾಸಿನಿಯೇ ..
ಬುವಿಗೆ ಹೊದಿಕೆಯ ನೀಡೆ .. 
ಮತ್ತೆ ಬಾರೆ ಬೆಳದಿಂಗಳೇ ..
ಮತ್ತೆ ಬಾರೆ ಒಳ ಬೆಳಕೆ  ..

- ಅಮರ ಕೆ ಜಿ ಕಾನುಗೋಡು 

Thursday, December 10, 2015

-- ಅಧಮ್ಯ --



ಕನಸೊಂದೆ ನಮ್ಮಿಬ್ಬರಿಗೂ ..
ಹೊಡೆದಾಟವೂ ಒಟ್ಟಿಗೇ ..

ಜಗದ ಪರಿಪಾಟವ
ಕಲಿತೆವು ಒಬ್ಬರಿಗೊಬ್ಬರಿಂದ

ನಕ್ಕೆವು .. ಅತ್ತೆವು
ಒಟ್ಟೊಟ್ಟಿಗೆ ..

ಇಬ್ಬರ ಅಭಿಲಾಷೆಯೂ
ಇನ್ನೊಬ್ಬರ ಅಭಿವೃದ್ದಿ

ಇಬ್ಬರೂ ಗೆದ್ದೆವು
ಇಬ್ಬರೂ ಸೋತೆವು! ..

ಪಯಣದ ಕಷ್ಟದಿ
ಇಬ್ಬರೂ ಪಾರಾದೆವು ..

ಬಿದ್ದೆವು .. ಮೇಲೆದ್ದೆವು
ಜೊತೆ ಜೊತೆಯಲೇ ಇದ್ದೆವು ..

ಅಪ್ರತಿಮ ಪ್ರೀತಿ ನಿನ್ನ ಮೇಲೆ
ಆಗಸಕ್ಕೆ ಕೊಂಚ ಮೆಟ್ಟಿಲಷ್ಟೆ

ಅಮೃತದಷ್ಟೇ ಶುದ್ದ
ಗೌರವದ ಸದ್ಭಾವನೆ

ಮೊದಲು ಜನಿಸಿ ನೀ ಜಪಿಸಿದ್ದೇ
ನಂಗೆ ನೀನು ಸಿಗಲು ಕಾರಣ

ಅದಕ್ಕೆ ಎಂದೆಂದಿಗೂ ಧನ್ಯ ..
ನಿನ್ನಿಂದಲೇ ನಾನು ಅಧಮ್ಯ ..

- ಅಮರ ಕೆ ಜಿ ಕಾನುಗೋಡು 

ಮೌನ ಬಳ್ಳಿ


ನವೀನ ಸೂರ್ಯನ  ಮುಂಜಾವಿಗೆ
ಕೈದಾವರೆಗೆ ವಿಸ್ಮಯ ಕಿರುನಗೆ

ಮಾತೆಲ್ಲ ಪುಳಕಿತ ಸೃಷ್ಟಿಗೆ .
ನಸುಗೆಂಪು ಕಣ್ಣೀರು ಜಾರಿದ ಕಲಶಕೆ

ಅದೆಲ್ಲಿ  ಹುಡುಕಿತು ಸೃಷ್ಟಿ ನಿನಗೆ
ಕುಲ ಬೆಳಗುವ ಕಣ್ಣೊಟವ ..

ಅಲ್ಲೇ ಮಲಗಿದ  ನನಗೆ ..
ಮತ್ತೆಲ್ಲೋ ಕರೆದ ಜೋಂಪು ..

ನೀ ಕೈ ಇಟ್ಟ ಗಲ್ಲಕೆ ..
ಬಿಸಿ ಮುತ್ತೇ ಬೇಡ ..

ಕಣ್ಮುಚ್ಚಿ ಕೇಳಿದ ಆ ನಿನ್ನ ಸ್ವರ ..
ಅದೆಲ್ಲೋ ಕೊಳಲ ನಾದದ ಇಂಪು ..

ಮೆಲುಕು ಹಾಕಿತು ಮನ
ಮತ್ತೊಮ್ಮೆ ನಿನ್ನ ನೆನಪ ..

ಇರಬಾರದಿತ್ತೆ ನನ್ನ ಕಣ್ಣಂಚಿನಲಿ
ಆ ನಿನ್ನ ಬಿಸಿ ಸ್ಪರ್ಶ ..

ಹೃದಯಕ್ಕೆ  ಅದೆಷ್ಟು ವಿಸ್ಮಯ ..
ಆ ನಿನ್ನ ಪ್ರತೀ ಕರೆಗೆ ..

ವಿದ್ಯುತ್ ಪ್ರವಾಹ ನರ ನಾಡಿಗೆ ..
ನೀ ಕರೆದ ನಾದ ಧ್ವನಿ ಸುರುಳಿಗೆ ..

ಸೋತೆ ನಾನು ನಿನ್ನಮ್ಮಗೆ ..
ನನಗೆ ಕೊಟ್ಟ 'ನೀನೆಂಬ' ಬಹುಮಾನಕೆ!!

ಅಪ್ಪ ಎಂಬ ಆ ನಿನ್ನ ಕರೆ
ಒಳ ಅಂತರಗದ ಶುದ್ದ ಗೆರೆ..

ಅದೇನನಿಸಿತೋ ಆ ಸ್ರುಸ್ಟಿಕರ್ತನಿಗೆ
ನನಗಾಗಿ ನೀಡಲು ನಿನ್ನ ಕೆಲ ಕಾಲಕೆ ..

ಎಲ್ಲಿದ್ದರೇನು ಹೇಗಿದ್ದರೇನು
ನಂಗೆ ನೀನು ಅದೇ ಮೌನ ಬಳ್ಳಿಯ ಮಗಳೇ ..


- ಅಮರ ಕೆ ಜಿ ಕಾನುಗೋಡು

Wednesday, December 9, 2015

ನೀಬಾರೆಯ ಮತ್ತೆ ? ನನಗಾಗಿ ..


ನನ್ನೆಲ್ಲ ದೇಹ ಬಡಿತ..   ನೀನಲ್ಲ,  'ಕನಸು' ಎಂದು ತಿಳಿದರೂ ..
ಕೆಲವೊಮ್ಮೆ ನೀನು ನಿಜವೆಂದು ನಂಬಿದ್ದೆ ..
ಕನಸಿನ ಹೃದಯಕೆ ಒಲುಮೆಯ  ಪ್ರೀತಿಯು  ಎಂದಿಗೂ  ವಿಯೋಗ ..
ಎಲ್ಲ ಕಳೆದುಕೊಂಡ ಏಕಾಂಗಿ ಆತ್ಮದ ಕಲ್ಪನೆ ..
ಆ ಎಲ್ಲ ವೈಭವದ ದಿನಗಳು ಅತಿರೇಕದ ಸ್ಪಷ್ಟನೆ ..
ನಿನ್ನಾ ಮೃದು ಸ್ಪರ್ಶ ನನ್ನ ಭಾವನೆಯ ಕೆದಕಿವೆ ..
ನಿನ್ನಾ ತುಟಿಗಳ ಸಿಹಿರುಚಿ ಕೋಲ್ಮಿಂಚ ಬೆಳಗಿವೆ
ನಿನ್ನಾ ಹೃದಯ ಬಡಿತ ನನ್ನ ಹೃದಯವ ಹಿಡಿದಿವೆ ..
ನಿನ್ನಾ ಬಿಸಿಯುಸಿರು ಬೆವರ ಕತ್ತ ಚರ್ಮವ ತಣಿಸಿದೆ..
ಪ್ರೇಮಿಗಳಂತೆ ಹಿಡಿದಪ್ಪಿವೆ  ನಿನ್ನಾ  ಕೈ ಬಲ ..
ಆಗಲೇ  ದಿಟ್ಟಿಸಲು -ನಿನ್ನ- ಈ ಕಣ್ಣ ತೆರೆದೆ, ಆದರೆ ನೀನಿಲ್ಲವಲ್ಲ ಅಲ್ಲಿ ..
ಕನಸಲ್ಲೇ ಮರೆಯಾದ ಮರೀಚಿಕೆಯಾದೆ ...
ನೀನು ನಿಜವಲ್ಲವೆಂದರಿತಾಗ .. ಕಣ್ಣಿನಲ್ಲಿ ಕನಸಿಲ್ಲದ ಕಣ್ಣೀರು !!!
ಉದ್ವೇಗದ ರಕ್ತದ ಚಲನೆ ..
ಮತ್ತೊಮ್ಮೆ ನನ್ನ ಹೃದಯ ಬರಿದು .. ಆತ್ಮ ಒಬ್ಬೊಂಟಿ ..
ಮತ್ತೊಮ್ಮೆ ಕನಸಿಗೆ ಜಾರುವ ತವಕ ..
ಕನಸೆಲ್ಲ ನನಸಾಗುವ ಆಸೆಯ ಕುಹುಕ ..

ನೀ ಬಾರೆಯಾ ಮತ್ತೆ .. ಕೇವಲ ನನಗಾಗಿ ..

- ಅಮರ ಕಾನುಗೋಡು

Thursday, September 6, 2012

ಮರೆಮಾಚು ...


ಅದವಳ ಶಾಲೆಯ ಮೊದಲನೇ ದಿನ ...
ಅಪ್ಪನೊಡೆ ಕೈಬೆರೆಳ ಹಿಡಿದು ಹೊರಟ ದಿನ
ಅವನಿಗೆ ಹೆಮ್ಮೆಯಾದರೂ ಇಬ್ಬರಲ್ಲೇನೋ ದುಗುಡ ದುಃಖ!!
ಪುಟ್ಟ ಮಗಳೋಡೆ ಪ್ರೀತಿಯ ಅಪ್ಪಾಜಿ ...
ಇನ್ನೇನು ಮಗಳ ಬಿಟ್ಟು ಬರುವ ಸಮಯ ..
ನನ್ನ ಬಿಟ್ಟು ಹೋಗದಿರು ಅಪ್ಪ!! ..
ಕಣ್ಣಿರಿನ ಹೊಳೆಹರಿಯೆ ನಾನೊಬ್ಬಳೆ ಹೇಗಿರುವದೆಂಬ ದುಗುಡ
ನಾನಿಲ್ಲಿರಲಾರೆ ಒಬ್ಬಳೇ ಬಿಡದಿರು ನನ್ನ ಇಲ್ಲಿ
ಕಣ್ಣೊರೆಸಿ ಸಮಾಧಾನಿಸಿದಾತ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ
ನಾನಿಲ್ಲೇ ಇರಲು ಅಸಾದ್ಯವೇನೋ ..

ಅದವಳ ಮದುವೆಯ ದಿನ ..
ಮುದ್ದು ಮಗಳ ಹೊರಟ ಗಳಿಗೆ ಅದೆಸ್ಟು ಅಹಿತ ಅವಗೆ ..
ಆ ದಿನದ ಅವಳಲಂಕಾರ ಅವನೆಂದೂ ನೋಡಿಲ್ಲ ..
ಆದರೂ ಅವಳ ರೂಪವ ಬಲ್ಲವ ಅವನು ..
ಹೋಸಜೀವನದೊದೆ ಹೊರಟೊಡೆ ಮಮತೆಯ ಭಾಷ್ಪ ..
ಆನಂದ ಬಾಷ್ಪದಲ್ಲಿಯೂ ದೂರವಾಗುವಿಕೆಯ ಕಣ್ಣೀರ ಹನಿ ಅವನಲ್ಲಿ ..
ಅವಳು ದುಗುಡದ ಕಣ್ಣೀರನ್ನು ಗಮನಿಸುತ್ತಾಳಂದು..
ಕಣ್ಣೊರೆಸಿ ಸಮಾಧಾನಿಸಿದಾಕೆ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ ..
ನಾನಿಲ್ಲೇ ಇರಲು ಅಸಾದ್ಯವೇನೋ ..

ಅವನ ಕೊಟಡಿಗೆ ಬಂದವಳು ಅವನ ಹಣೆಗೊಂದು ಮುತ್ತಿಟ್ಟು ..
ಅವನ ಹಾಸಿಗೆಯ ಬಲಕ್ಕೆ ಕೂರುತ್ತಾಳಂದು..
ಅವನ ಕೊನೆ ಗಳಿಗೆಯ ಆಸ್ಪತ್ರೆಯ ಹಾಸಿಗೆ ಅದು ...
ಅವಳ ಕೈ ಹಿಡಿದು ಬಿಗಿಯಾಗಿ ಅಪ್ಪಿತ್ತು..
ಅವನಿಗೆ ಶಕ್ತಿಬರಲೆಂಬ ಮಹದಾಸೆ ಅವಳದ್ದು ..
ಬೆಳೆದಾ ಮಗಳೋದೆ ಮರಣದ ಹಾಸಿಗೆಯಲ್ಲಿ ಹೆಮ್ಮೆಯ ಅಪ್ಪಾಜಿ ...
ಚಿಮ್ಮಿದ ಕಣ್ಣೀರಿನ ಜೊತೆ ಅಪ್ಪ ನನ್ನ ಬಿಟ್ಟು ಹೋಗದಿರೆಂಬ ಬಯಕೆ ..
ನಾನಿನ್ನ ಕಳೆದುಕೊಳ್ಳುವನೆಂಬ ದುಗುಡ ...
ಕಣ್ಣೊರೆಸಿ ಸಮಾಧಾನಿಸಿದಾತ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ
ನಾನಿಲ್ಲೇ ಇರಲು ಅಸಾದ್ಯವೇನೋ ..

-- ಅಮರ ಕೆ ಜಿ , ಕಾನುಗೋಡು


ಉಸಿರಾಟದ ಒಲುಮೆಯ ಚಿಲುಮೆ ..

ನಾನಸ್ಟೆ ಅವೆರಡು ಸಂವತ್ಸರವ ಕಳೆದಿದ್ದೆ ..
ನನ್ನ ಹೆತ್ತಾತ ದೂರಾಗಿದ್ದ ..
ನನ್ನನ್ನೆಂದಿಗೂ ಪ್ರೀತಿಸುವ ಪ್ರಮಾಣಿಸಿದ್ದ ..
ಅದರೇನು.. ತಾನಿರಲು ಸಾದ್ಯವಿಲ್ಲೆಂದ ...
ದಿನಗಳು ವಾರಗಳಾದವು
ವಾರ ಮಣಿಗಳ ಮಾಲೆ ಮಾಸಗಳಾದವು ..
ಮಾಸಗಳ ತುದಿ ಮೊದಲು ವರುಷಗಳ ಕಳೆದಿತ್ತು ...
ನನ್ನ ಕನಸ ಆ ಅಪ್ಪನ ಕಾಣಲೇ ಇಲ್ಲ !! ..
ನನ್ನಾ ಕಣ್ಣೀರನ್ನ ವರೆಸಲು ಆತನಿರಲಿಲ್ಲ .. ..
ನನ್ನ ಮಲಗುವ ನಿದ್ದೆಗೆಂದೂ ಆತನ ಕಟ್ಟುಕತೆ ಮುದ್ದಿಸಲಿಲ್ಲ !!
ನನ್ನಾ ಹುಟ್ಟುಹಬ್ಬಕೆ ಆತನ ಕಾಣಿಕೆಗಳೆಲ್ಲಿ?
ಅದರೇನು ಪ್ರತಿ ಹಬ್ಬಕೂ ನನ್ನಲ್ಲಿ ಆತನ ನಿರೀಕ್ಷೆ ...
ನನ್ನ ಶಾಲೆಯ ಮೊದಲದಿನವ ನೋಡಲಿಲ್ಲ ಅವನು ..
ನನ್ನ ಶಾಲಾ ಜೀವನವ ಕೆದಕಲ್ಲಿಲ್ಲ ಕೊನೆಗೂ ...
ನಾನೆಸ್ಟು ಚತುರ ತಿಳಿಯದಾತ!! ...
ನನ್ನ ಅಂಕಪಟ್ಟಿಯಲ್ಲಿ ಎಲ್ಲದರಲ್ಲೂ ನಾಪಡೆದ 'A'
ಕೆಲವೊಮ್ಮೆ ನಾನವಗೆ ಕರೆಮಾಡುವಾಸೆ ..
ನಾನಿನ್ನೂ ಬದುಕಿರುವೆಂಬುದ ತಿಳಿಸುವ ತವಕ ..
ನಾನಿನ್ನೇನು ಹದಿನೆಂಟು ದಾಟುವೆ ...
ನಾ ಕಲಿಯಬೇಕೆಂಬ ಕಾರನ್ನು ಕಲಿಸುವ ಅವನೆಲ್ಲಿ?
ನಾ ಹೋಗುವ ಉನ್ನತ ಶಿಕ್ಷಣಕೆ ಆತನ  ಉಸಿರ ಬಯಕೆ ...
ನಾ ನನ್ನಾ ಬವಿಷ್ಯದೆಡೆ ತವಕಿಸುತ್ತಿರುವೆ... 
ಅದರೂ ಕಳೆದ ದಿನಗಳ  ಮಿಸುಕಾಡುತಿರುವೆ ...
ಊಹೆಗೂ ಮೀರಿ ನಾನೇನು ತಪ್ಪೆಸಗಿರುವೆ ?
  ಊಹೆಗೂ ಮೀರಿ ನಾನೇನು ತಪ್ಪೆಸಗಿರುವೆ !!?
ನನ್ನಾ ಪೋಷಕರು ವಿಚ್ಛೇದನ ಗೊಂಡಿದ್ದಾರಷ್ಟೇ ...
ಆದರೆ ಆದರೆ ...
  ನಾನು ಆತನ ಕಳೆದುಕೊಂಡೆ !!  
ಉಸಿರಾಟದ ಒಲುಮೆಯ ಚಿಲುಮೆಯ ನಾ ಪದೆಯದಾದೆ ...
ಅವರಿರ್ವರ ಜಗಳಕೆ ಕೂಸು ಬಡವಾಯಿತೇನೋ!!


Thursday, June 9, 2011

ಬ್ರಷ್ಟಾಚಾರ ನಿರ್ಮೂಲನೆಗೆ ನನ್ನದೊಂದು ಕನಸ ಕೂಸು . . . .

ಬಹುಷಃ ಈ ಬ್ರಷ್ಟಾಚಾರ ಎನ್ನುವ ಪಿಡುಗು ಹುಟ್ಟುವದು ಮತದಾರರಿಂದ. ಮತದಾರ ಮನೆ ಬಾಗಿಲಿಗೆ ಬಂದ ಚುನಾವಣಾ ಅಭ್ಯರ್ಥಿಯಿಂದ ಕ್ಷುಲ್ಲುಕ ಹಣ ಹೆಂಡಕ್ಕಾಗಿ ಬಾಯ್ಬಿಟ್ಟು ತನ್ನ ಅತೀಅಮೂಲ್ಯವಾದ ಮತವನ್ನ ಮಾರಾಟ ಮಾಡಿಬಿಡುತ್ತಾನೆ ಅಂದು ೧೦೦ ರೂಗೆ ಬಾಯ್ಬಿಟ್ಟ ಈತ ಮುಂದೆಂದೂ ಸರಿಮಾಡಲಾಗದಂತ ಬ್ರಷ್ಟಾಚಾರದ ರೋಗವನ್ನು ಪಸರಿಸುತ್ತಾನೆ. ಹಣ ಸುರಿದು ಗೆದ್ದ ಅಬ್ಯಾರ್ಥಿಯಾದರೂ ಮನುಷ್ಯನೇ .. ಸಾಲ ಮಾಡಿ ಗೆದ್ದ ಈತನಿಗೆ ಮತದಾರರಿಂದ ದುಡ್ಡು ಪಡೆಯುವ ರೋಗ ಹರಡಿರುತ್ತದೆ .. ಈತ ಈ ರೋಗವನ್ನು ಅಧಿಕಾರಿಗಳಿಂದ ದುಡ್ಡು ಪಡೆಯುವ ಮುಖಾಂತರ ಅವರಿಗೂ ಹರಡಿಸಿಬಿಡುತ್ತಾನೆ. ಅಧಿಕಾರಿಗಳೂ ಅದನ್ನ ತನ್ನ ಕೆಳಗಿನ ಅಧಿಕಾರಿಗಳಿಗೆ ಹರಡಿಸಿ .. ಒಟ್ಟಾರೆ ಉಸಿರಾಡುವ ಎಲ್ಲ ಮನುಷ್ಯರೂ ಈ ಭಯಾನಕ ರೋಗಕ್ಕೆ ಬಲಿಯಾಗುತ್ತಾರೆ .. ಮತದಾನ ಮಾಡುವಾಗ ನಿಯತ್ತಿದ್ದರೆ ದುಡ್ಡು ಪಡೆಯುವ ಅಧಿಕಾರಿಯಿಂದ ನಿಯತ್ತನ್ನು ಬಯಸಬಹುದು ... ನಾವು ನೆಡುವ ಗಿಡ ಮಾವು ಆಗಿದ್ದರೆ ನಮಗೆ ಅದು ಮಾವಿನ ಹಣ್ಣನ್ನು ಪಡೆಯಬಹುದು ಅಲ್ಲವೇ? .
ಈ ರೋಗ ಎಷ್ಟು ಬಲಿಷ್ಟವಾಗಿ ಹರಡಿದೆಯೆಂದರೆ ಈಗ ಎಲ್ಲರ ಕೈ ಮೀರಿ ಬ್ರಷ್ಟಾಚಾರ ನರ್ತಿಸುತ್ತಿದೆ.. ಬ್ರಷ್ಟಾಚಾರದ ಶಿಶು ರೌಡಿಸಂ .. ದೌರ್ಜನ್ಯ .. ಅನೈತಿಕತೆ .. ಆತಂಕ ಇದನ್ನು ಸಹಿಸರಾರದಷ್ಟಾಗಿದೆ ...
ಬಹುಷಃ ಈ ರೋಗವನ್ನು ನಿವಾರಿಸಲು ಒಂದು ಜೆನರೇಶನ್ ಸಂಪೂರ್ಣ ನಿರ್ನಾಮವಾಗಬೇಕಿದೆ ...
ನನಗೆ ಈ ರೋಗದ ನಿವಾರಣೆಗೆ ಕೆಲವು ಯೋಚನೆಗಳು ಕೆಲವೊಮ್ಮೆ ಬರುತ್ತಿರುತ್ತದೆ .. ಈ ಬ್ಲಾಗ್ ಓದುಗರೊಂದಿಗೆ ಇದನ್ನ ಹಂಚಿಕೊಳ್ಳುವಾಸೆ
೧. ಪ್ರತಿಯೊಬ್ಬ ಪ್ರಜೆಗೂ ಫುಲ್ಲಿ ಲೋಡೆಡ್ ಗನ್ನನ್ನು ಅತೀ ಉತ್ತಮ ಡಿಸ್ಕೌಂಟ್ ನಲ್ಲಿ ಕೊಡಬೇಕು . ಆತನಿಗೆ ಯಾವಾಗಲು ಇದನ್ನು ತನ್ನೊಡನೆ ಇಟ್ಟುಕೊಳ್ಳಲು ಅವಕಾಶ ಕೊಡಬೇಕು . ಇದರಿಂದ ಪ್ರತಿಯೊಬ್ಬನಿಗೂ ಬ್ರಷ್ಟಾಚಾರದ ವಿರುದ್ದ ಮಾತಾಡಲು ಸ್ವಲ್ಪ ಧೈರ್ಯ ಬರಬಹುದು. ಚುನಾವಣ ಭಾಷಣಗಳಲ್ಲಿ ಬೊಗಳೆ ಬಿಟ್ಟರೆ ಮುಂದಿರುವ mudi ಮನುಷ್ಯ ಅವನನ್ನು ಧಂ ಅನ್ನಿಸಬಹುದು .. ತಹಶೀಲ್ದಾರ್ ಆಫೀಸ್ ನಲ್ಲಿ ಅದಿಕಾರಿ ದುಡ್ಡು ಕೇಳಿದ ನಂತರದ ಕ್ಷಣದಲ್ಲಿ ಆತ ಇಲ್ಲದಿರಬಹುದು .. ನಾವು ಮಾಡುವುದಿಲ್ಲ ಎಂದಾದರೆ ನಮ್ಮೆದುರು ರೌಡಿಸಂ. ಅದೇ ನನ್ನ ಮತ್ತು ನನ್ನ ಸುತ್ತಮುತ್ತಲೂ ಇದ್ದವರ ಬಳಿ ಲೋಡೆಡ್ ಗಂನಿದೆ ಅಂದ್ರೆ ಅದು ಸುಲಭ ಅಲ್ಲ . ಇದರಿಂದ ಅನೇಕ ಅಮಾಯಕರೂ ಕೂಡ ಸಾವನ್ನಪ್ಪಬಹುದು. ಆದರೂ ಕೂಡ ಒಂದು ಸಮಾಜವನ್ನ ಸರಿದಾರಿಗೆ ತರಲು ಕೆಲವೊಮ್ಮೆ ನಾವು ಒಳ್ಳೆಯದನ್ನು ಕಳೆದುಕೊಳ್ಳಬೇಕು . .
2 ಎರಡನೆಯದಾಗಿ ಹಣ . ಹಣ ಹರಿಯುವ ಎಲ್ಲಾ ದಾರಿಗಳು ಗೊತ್ತಾಗುತ್ತಿರಬೇಕು . ಚುನಾವಣ ಅಭ್ಯರ್ಥಿ ಮತದಾರನಿಗೆ ೧೦೦ ರೂ ಕೊಟ್ಟರೆ ಕೂಡಲೇ ಅದು ತಿಳಿಯಬೇಕು . ಅಧಿಕಾರಿ ಲಂಚ ಪಡೆದರೆ ಅದೂ ಕೂಡ ನೋಟ್ ಆಗುವಂತಿರಬೇಕು .ಇದು ಅಸಾಧ್ಯ ಎಂಬುದು ನಮ್ಮೆಲ್ಲರ ಕಲ್ಪನೆ . ಆದರೆ ಇದು ಸಾಧ್ಯ . ಈ ಪೇಪರ್ ಹಣವನ್ನ ನಿರ್ಮೂಲನೆ ಮಾಡಬೇಕು . ಎಲ್ಲ ಪೇಪರ್ ಹಣವನ್ನ ಸುಡಬೇಕು . ಈ ಎಲ್ಲ ಹಣವನ್ನ ಎಲೆಕ್ಟ್ರೋನಿಕ್ ದುದ್ದನ್ನಗಿ ಪರಿವರ್ತಿಸಬೇಕು . ಓಕೆ ಇಂದಿನಿಂದ ನಮ್ಮ ಎಲ್ಲ ಹಣದ ವ್ಯವಹಾರಗಳು ನಮ್ಮ ಕಾರ್ಡ್ ನ ಮುಖಾಂತರ ಅಥವಾ ಮೊಬೈಲ್ ಮುಖಾಂತರ ಆಗಬೇಕು . ಈ ಪ್ರಾಕ್ಟಿಸ್ ಒಮ್ಮೆ ಚಾಲನೆಗೆ ಬಂದರೆ ಪ್ರತಿಯೊಬ್ಬನ ಕೈಯಲ್ಲೂ ದುಡ್ಡು ಪಡೆಯುವ ಸಾಧನೆ ಇರಬೇಕು . ಬಹುಷಃ ಎಲ್ಲರ ಬಳಿಯಲ್ಲಿರುವ ಮೊಬೈಲ್ ಇದಕ್ಕೆ ಸಾಧಕವಾದೀತು . ನಾನು ಒಂದು ರೂ ನ ಶೇಂಗಾ ತಿಂದರೂ ಕೂಡ ಅದು ಬಿಳಿ ಹಣದಿಂದ ಆಗಿರುತ್ತದೆ . ಇದರಿಂದ ಸುಮಾರು ತೊಂಬತ್ತು ಬಾಗ ಕಪ್ಪು ಹಣ ನಾಶವಾಗುತ್ತದೆ .

೩ ಸರಕಾರದ ಕಛೇರಿಗಳಲ್ಲಿ ದೌರ್ಜನ್ಯ : ಪ್ರತಿ ಅಧಿಕಾರಿಯೂ ಕೂಡ ಒಬ್ಬನ ಸೇವೆಯನ್ನು ಮಾಡಿದಾಗ , ಸೇವೆ ಪಡೆದ ವ್ಯಕ್ತಿಯಿಂದ ಸಹಿ ಪಡೆಯಬೇಕು . ವ್ಯಕ್ತಿ ಸಹಿ ಮಾಡದಿದ್ದರೆ ಅವನ ಸೇವೆ ವ್ಯರ್ಥ ವಾಗಬೇಕು . ಪ್ರತೀ ತಿಂಗಳಲ್ಲಿ ಮಿನಿಮುಂ ಸೇವೆಯನ್ನು ಮಾಡಬೇಕು. ಪ್ರತಿ ಸಹಿಗೂ ಒಂದು ಸೇವೆ ನಂಬರ್ ಇರಬೇಕು . ಇದರಿಂದ ಅಧಿಕಾರಿಗಳು ಸಹಿಯನ್ನು ಪೋರ್ಜರಿ ಮಾಡುವ ದುರಭ್ಯಾಸ ತಪ್ಪುತ್ತದೆ .ಅಧಿಕಾರಿಯ ಸೇವೆ ಮಿನಿಮುಂ ಗಿಂತ ಕಡಿಮೆ ಇದ್ದಾರೆ ಅವನ ಕೆಲಸ ಕಥಂ . ಪ್ರೊಮೋಷನ್ ಅವನ ಸಹಿ ಪಡೆದ ಸಂಖ್ಯೆಯಿಂದ ಅಧಾರವಾಗಿರಬೇಕು . ನೋಡಿ ಸಾರ್ ಹೀಗೆ ಮಾಡಿದರೆ ನೀವು ಅಲೆಯುವ ಅವಶ್ಯಕತೆ ಇಲ್ಲ . ಅಧಿಕಾರಿಗಳು ನಿಮ್ಮ ಹಿಂದೆ ಅಲೆಯಬೇಕಾದೀತು .

ಇನ್ನೂ ಕೆಲವು ಚುನಾವಣಾ ಬಗ್ಗೆ ಇವೆ . ಮುಂದುವರೆಸುತ್ತೇನೆ .