ಬೆಳದಿಂಗಳೇ
ಚಂದಿರನ ಮಡಿಲ ಮಲ್ಲಿಗೆಯೇ
ಬೆಳಕ ಸುವಾಸನೆಯ ಚೆಲ್ಲೇ ..
ಘಮಿಸುವ ನಿನ್ನ ತಂಗಾಳಿಯ ..
ಮಿಂದ ಚರ್ಮವ ಬೆಳಗಿಸೆ..
ನಿನ್ನ ಹತ್ತಿರ ಎನ್ನ ಸೆಳೆದು
ಪಿಸುಮಾತ ಹಸಿವನು ಇಂಗಿಸೆ..
ನರ್ತಿಸೆ ನನ್ನೊಡೆ ..
ಹಸಿದು ಹಿಡಿಯೆ ನನ್ನ ಕೊರಳ ..
ಮಂದವಾಗದ ಬೆಳಕ ನೀ ಚೆಲ್ಲೇ ..
ರವಿಯ ಮೊದಲ ಕಿರಣದೊರೆಗೂ
ದೂರ ಬಹುದೂರ ತೇಲಿಸೇ ನನ್ನ ..
ಆಲಿಂಗನದ ಬಲದಿ
ತೊದಲ ನುಡಿಯ ದಣಿಸೆ ..
ಮುದ್ದಿಸೆ ಮಂದಹಾಸಿನಿಯೇ ..
ಬುವಿಗೆ ಹೊದಿಕೆಯ ನೀಡೆ ..
ಮತ್ತೆ ಬಾರೆ ಬೆಳದಿಂಗಳೇ ..
ಮತ್ತೆ ಬಾರೆ ಒಳ ಬೆಳಕೆ ..
- ಅಮರ ಕೆ ಜಿ ಕಾನುಗೋಡು