ವಟು ಹಳದಿ ಬಟ್ಟೆಯ ಸುತ್ತಿ ಒಂದು ಎಲೆ ಇರುವ ಆ ಮುತ್ತುಕದ ಕೋಲನ್ನು ಹಿಡಿದು ಬುಜಕ್ಕೆ ಒರಗಿಸಿ . ಗೋಪಿ ಚಂದನವ ಲೇಪಿಸಿ . ಚಿಕ್ಕದಾದ ಜುಟ್ಟವನ್ನ ಬಿಟ್ಟು .. ಹಳದಿ ಶಲ್ಯವ ಚೀಲವ ಮಾಡಿ ಭವತಿ ಬಿಕ್ಷಾಂ ದೇಹಿ ಎಂದಾಗ ನಿಜಕ್ಕೂ ' ಭಿಕ್ಷೆ ' ಎಂಬ ಪದ ಧಾರ್ಮಿಕ ವಾಗಿ ಅತೀ ಶ್ರೇಷ್ಠ ಅರ್ಥವುಳ್ಳದ್ದು ಎಂದು ಯಾರಿಗಾದರೂ ತಿಳಿಯುವಂತದ್ದೆ . ನಾನು ಇಲ್ಲಿಯವರೆಗೆ ಅಷ್ಟೇನೂ ಧಾರ್ಮಿಕ ಜವಾಬ್ದಾರಿ ಹೊತ್ತಿರಲಿಲ್ಲ .. ಇವತ್ತಿನ ದಿನದಿಂದ ನನ್ನ ನಾಲಿಗೆಯಲ್ಲಿ ಸುಸಂಸ್ಕೃತ ನುಡಿಗಳನ್ನು ಚೆಲ್ಲುತ್ತೇನೆ .. ಮನುಷ್ಯನಾಗಿ ಹುಟ್ಟಿದ ಈ ಜನ್ಮ ಬಹಳ ಶ್ರೆಷ್ಟದ್ದು .. ಅನೇಕ ಪ್ರಾಣಿಗಳಿಗಿಂತ ಮಿಗಿಲಾದ ನಾನು ಶಬ್ಧವನ್ನ ನುಡಿಗಳಾಗಿ ಪ್ರಸವಿಸಬಹುದು. ಇಲ್ಲಿಯವರೆಗೆ ಅನೇಕ ಪದಗಳನ್ನು ಕಲಿತಿದ್ದೇನೆ .. ಇನ್ನು ಮುಂದೆ ಸುಸಂಸ್ಕೃತ ಪದಗಳನ್ನು ಕಲಿಯುತ್ತೇನೆ .. ನನಗೆ ಅವುಗಳನ್ನು ಕಲಿಯಲು ಇರುವ ದಿನದ ಒಂದು ಹಗಲು ಒಂದು ರಾತ್ರೆ ಸಾಲದು ... ನೀವು ಬಿಕ್ಷೆ ನೀಡಿ . ನನ್ನ ಉಳಿದ ಕ್ಷಣಗಳನ್ನು ಧಾರ್ಮಿಕ ಪದಗಳನ್ನು ಉಚ್ಚರಿಸಲು ಮೀಸಲಿಡುತ್ತೇನೆ . ಈ ಬೂಮಂಡ್ಲಕ್ಕೆ ಒಳ್ಳೆಯದನ್ನು ಸದಾ ಪಸರಿಸುತ್ತೇನೆ . ಹೀಗೆಲ್ಲಾ ಒಳ್ಳೆಯ ಅರ್ಥಗಳಿರಬಹುದು. ಗುರು ಶಿಷ್ಯರ ಸಂಬಂದದಲ್ಲಿ ಅನೇಕ ಶಿಷ್ಯರು ತಮ್ಮ ಗುರುವಿಗಾಗಿ ಬಿಕ್ಷೆ ತರುವ ಅನೇಕ ಧಾರ್ಮಿಕ ವ್ಯವಸ್ಥೆಯನ್ನು ಕೇಳಿದ್ದೇವೆ . ಇದರರ್ಥದಲ್ಲಿ ಗುರುಗಳಿಗೆ ಬಿಕ್ಷೆ ಕೇಳುವ ಸಮಯವೂ ಅತೀ ಮುಖ್ಯ ಎನ್ನುವ ಸಾದಾರಣ ಅರ್ಥವನ್ನು ಊಹಿಸಬಹುದು . ಇದನ್ನೆಲ್ಲಾ ಗಮನಿಸಿದರೆ ಸಾಧು ಸಂತರು ಗುರುಗಳು ಇವರೆಲ್ಲರಿಗೂ ಅನ್ವಯವಾಗುವ ಭಿಕ್ಷೆ ಅನ್ನುವ ಪದ ಅದೆಷ್ಟು ಶ್ರೇಷ್ಟಎಂಬುದು ನಮೆಗೆಲ್ಲ ಅರಿವಾಗುತ್ತದೆ . ಇವರೆಲ್ಲರಿಗೂ ಭಿಕ್ಷೆ ಒಂದು ದಂದೆಯಲ್ಲ. ತಮ್ಮ ಸುಸಂಸ್ಕೃತ ಹಾದಿ ಸುಗಮವಾಗಲೆಂದು ಎಲ್ಲರ ಮನುಕುಲದ ಒಳಿತಿಗಾಗಿ ಸ್ವೀಕರಿಸಿದ ಒಂದು ಮಾರ್ಗ ಅಷ್ಟೇ . ಭಿಕ್ಷೆ ಎನ್ನುವ ಪದಕ್ಕೆ ಒಂದು ತುದಿ ಇದೆ. ಹಿನ್ನೆಲೆ ಇದೆ . ಹೀಗಾಗಿ ಒಬ್ಬ ಭಿಕ್ಷೆ ಕೇಳುತ್ತಿದ್ದಾರೆ ಅಂದರೆ ಅವರು ಜಗತ್ತಿನ ಅತೀ ಶ್ರೇಷ್ಟ ಮಾನವ , ದೇವರಿಗೆ ಸಮಾನವದವರು ಎಂದರ್ಥ . ಮನುಷ್ಯನಿಗೂ ಕೂಡ ಒಂದು ಸಮಯದಲ್ಲಿ ನಾನು ಇವತ್ತು ಈ ಲೋಕವನ್ನು ತ್ಯಜಿಸಿದರೆ ಮತ್ತೆ ಹುಟ್ಟಿ ಬರುತ್ತೇನೆಂಬ ನಂಬಿಕೆ ಇತ್ತು. ರಕ್ತದ ಯಾವದೋ ಮೂಲೆಯ ಕಣದಲ್ಲಿ ಮತ್ತೆ ಮಾನವನಾಗಿ ಹುಟ್ಟಿಬರಲೆಂಬ ಸ್ವಾರ್ಥ ಅಡಗಿದ್ದರೂ , ಇಹ ಲೋಕ ಸಾದು ಸಂತರಿಂದ ಉಳಿಯುವದೆಂಬ ಭಾವನೆ ಆತನ ಧಾನ ಧರ್ಮಕ್ಕೆ ಪೂರಕವಾಗಿತ್ತು.
ಈಗ ಕಾಲ ಸ್ವಲ್ಪ ಬದಲಾಗಿದೆ . ಭಿಕ್ಷೆ ಬೇಡುವದು ಒಂದು ದಂದೆಯಾಗಿ ಮಾರ್ಪಟ್ಟಿದೆ . ಮನುಷ್ಯ ಬುದ್ದಿವಂತನಾದೊದಗಿಂದ ಸಂಸ್ಕಾರದ ಬೆಲೆ ಕುಸಿಯುತ್ತಿದೆ . ಭಿಕ್ಷೆ ಎಂಬ ಪದ ಎಲ್ಲರಿಗೂ ಹೆಸುಗೆ ಅನ್ನುವಷ್ಟು ಮಾರ್ಪಟ್ಟಿದೆ . ಭಿಕ್ಷೆ ಅಂದರೆ ಭಿಕಾರಿ ಅನ್ನುವ ಮನೋಭಾವ ಮೂಡುವಂತಾಗಿದೆ. ನಿಜವಾದ ಸಾಧು ಸಂತರಿಗೆ ಹಿಂಸೆಯಾಗುವಂತೆ ಭಾಸವಾಗುತ್ತಿದೆ .
ಈಗಿರುವ ಅನೇಕ ಭಿಕ್ಷುಕರು ನಿಜವಾಗಿಯೂ ಭಿಕ್ಷುಕರಲ್ಲ . ಬುದ್ದಿವಂತರು ಅತೀ ಬುದ್ದಿವಂತರು . ಇನ್ನೊಬ್ಬರ ಮನೋಭಾವವನ್ನು ಕಣ್ಣಳತೆಯಲ್ಲಿ ಅರಿಯುವ ಅಸಾಸುರರು . ಮನೋವಿಜ್ಞಾನಿಗಳು . ಹೃದಯದಲ್ಲಿ ಕ್ರೂರಿಗಳು . ಭಿಕ್ಷೆಯನ್ನೇ ಮೂಲ ದಂದೆಯಾಗಿ ಜನರನ್ನು ಮೋಸಗೊಳಿಸುತ್ತಿರುವ ಸಂಹಾರಕಾರರು . ಅವರದ್ದೇ ಒಂದು ದೊಡ್ಡ ಸಾಮ್ರಾಜ್ಯ . ಸಾಧುಗಳಂತೆ ವೇಷ ಧರಿಸಿ ದುಡ್ಡನ್ನು ಹಗಲ್ಲಲ್ಲಿ ಕ್ರೌಡಿಕರಿಸಿ ಸಂಜೆಯಾಗುತ್ತಿದ್ದಂತೆ ಇಲ್ಲ ಸಲ್ಲದ ದಂದೆಗೆ ಅಮಾಯಕರ ದುಡ್ಡನ್ನು ಚೆಲ್ಲುವವರು . ಭಿಕ್ಷಾಟನೆಯೇ ತಮ್ಮ ಸಂಸಾರದ ಮೂಲ ದಂದೆಯನ್ನಾಗಿಸಿ ತಮ್ಮ ಮುಂದಿನ ಪೀಳಿಗೆಗೂ ಅದರ ಲಾಭವನ್ನು ತೋರಿಸಿ ಅವರನ್ನೂ ಭಿಕ್ಷೆಗೆ ತಳ್ಳುವದು. ಬೆಂಗಳೂರಿನಂತಹ ನಗರಕ್ಕೆ ಹೋದರಂತೂ ಅಭ್ಭ ಎನ್ನುವತಹ ಬಣ್ಣ ಬಣ್ಣ ದ ಭಿಕ್ಷುಕರು . ಕೃಷಿಕನ ಸ್ವಂತ ಭೂಮಿಯಲ್ಲಿ ಅವನದೇ ಆದ ಗಡಿಗಳಿದ್ದಂತೆ ಭಿಕ್ಷುಕರೂ ತಮ್ಮ ತಮ್ಮ ಭಿಕ್ಷೆ ಬೇಡುವ ಗಡಿಗಳನ್ನು ಹಾಕಿಕೊಂಡಿರುತ್ತಾರೆ . ಅವರದ್ದೂ ದೊಡ್ಡ ದೊಡ್ಡ ಸಂಘಗಳಿರುತ್ತವೆ . ಅವರಲ್ಲೇ ಗುಂಪು ಘರ್ಶನೆಯಿರುತ್ತದೆ . ಅವರಲ್ಲೂ ಶ್ರೀಮಂತ ಭಿಕ್ಷುಕ ಬಡ ಭಿಕ್ಷುಕ ಎನ್ನುವ ಅಳತೆಗಲಿರುತ್ತದೆ . ದಾರಿಯಲ್ಲಿ ಹೋಗುವವರಿಗೆ ಹಿಂಸೆ ಆರಂಭವಾಗಿದೆ . ಅದರಲ್ಲೂ ಹೊರದೆಶದವರೆನಾದರೂ ಅವರ ಕೈಗೆ ಸಿಕ್ಕರೆ ಮುಗಿದೇ ಹೋಯ್ತು . ಅವರು ತಮ್ಮ ದೇಶಗಳಿಗೆ ಹೋಗಿ ಆಲ್ ಇಂಡಿಯನ್ಸ್ ಆರ್ ಬೆಗ್ಗರ್ಸ್ ಎಂದು ಹೇಳಿಬಿಡುತ್ತಾರಷ್ಟೇ .
ಸಮಾಜದಲ್ಲಿ ಭಿಕ್ಷುಕ ಎನ್ನುವ ಪದಕ್ಕೆ ಕ್ಷುಲ್ಲುಕ ಅರ್ಥ ಬಂದುಬಿಟ್ಟಿದೆ .
ಇಲ್ಲಿಯವರೆಗೆ ಹೇಳಿದ್ದು ದಾರಿಯಲ್ಲಿ ನಾವು ಕಾಣುವ ಭಿಕ್ಷುಕರು . ಆದರೆ ಇದಕ್ಕೂ ಭೀಕರ ಭಿಕ್ಷುಕರು ನಮ್ಮ ಸರಕಾರದಲ್ಲಿದ್ದಾರೆ , ಕಛೇರಿಗಳಲ್ಲಿರುತ್ತಾರೆ . . . . . !!! ..
ಒಟ್ಟಾರೆ ಹೇಳುವದಾದರೆ " ಭಿಕ್ಷೆ " ಅನ್ನುವ ಒಂದು ಶ್ರೇಷ್ಟ ಪದ ಇಷ್ಟು ಕೀಳುಮಟ್ಟಕ್ಕೆ ಮಾರ್ಪಾಡಾಗುತ್ತಿದೆಯೆಂದರೆ ಇದೊಂದು ದೊಡ್ಡ ಅನಾಹುತವೇ ಸರಿ!! .
- ಅಮರ ಕಾನುಗೋಡು ಗಣಪತಿ